NakshatraGanitaFilmsಸಾಕ್ಷ್ಯಚಿತ್ರಗಳು
Sky Detective
ಆಕಾಶದ ಸಾಕ್ಷಿ

Original documentary films. Real events, checked against the sky.

ನೈಜ ಸಾಕ್ಷ್ಯಚಿತ್ರಗಳು. ಆಕಾಶದ ನೈಜ ಸ್ಥಿತಿಯೊಂದಿಗೆ ಪರಿಶೀಲಿಸಿದ ಘಟನೆಗಳು.

All NakshatraGanita films begin with real records.

We go back to the original source, calculate the sky of that moment ourselves, and let the evidence decide the verdict. Where the record says less than the legend, we say so.

Every source and calculation is on the film's page, so you can check them yourself. Found a mistake? Tell us, and we will correct it.

ನಕ್ಷತ್ರಗಣಿತದ ಎಲ್ಲ ಸಾಕ್ಷ್ಯಚಿತ್ರಗಳೂ ನೈಜ ದಾಖಲೆಗಳಿಂದಲೇ ಆರಂಭವಾಗುತ್ತವೆ.

ನಾವು ಆ ಮೂಲ ದಾಖಲೆಗಳನ್ನು ಪರಿಶೀಲಿಸಿ, ಆ ಘಟನೆ ನಡೆದ ಸಮಯದಲ್ಲಿ ಆಕಾಶ ಹೇಗಿತ್ತು ಎಂಬುದನ್ನು ನಾವೇ ಲೆಕ್ಕ ಹಾಕುತ್ತೇವೆ. ನಂತರ ಸಿಕ್ಕಿರುವ ಸಾಕ್ಷ್ಯಗಳ ಆಧಾರದ ಮೇಲೆಯೇ ತೀರ್ಮಾನಕ್ಕೆ ಬರುತ್ತೇವೆ. ದಂತಕಥೆಗಳಲ್ಲಿ ಹೇಳಿರುವುದಕ್ಕೂ ಮೂಲ ದಾಖಲೆಗಳಲ್ಲಿ ಇರುವುದಕ್ಕೂ ವ್ಯತ್ಯಾಸವಿದ್ದರೆ, ಅದನ್ನೂ ಸ್ಪಷ್ಟವಾಗಿ ತಿಳಿಸುತ್ತೇವೆ.

ಪ್ರತಿಯೊಂದು ಸಾಕ್ಷ್ಯಚಿತ್ರದ ಪುಟದಲ್ಲಿ ನಾವು ಬಳಸಿರುವ ಮೂಲ ದಾಖಲೆಗಳು ಮತ್ತು ಲೆಕ್ಕಾಚಾರಗಳ ವಿವರಗಳನ್ನು ನೀಡಿರುತ್ತೇವೆ. ನೀವೂ ಅವುಗಳನ್ನು ಪರಿಶೀಲಿಸಬಹುದು. ಏನಾದರೂ ತಪ್ಪು ಕಂಡುಬಂದರೆ ನಮಗೆ ತಿಳಿಸಿ. ನಾವು ಅದನ್ನು ಪರಿಶೀಲಿಸಿ ಸರಿಪಡಿಸುತ್ತೇವೆ.

1898 · 7 min

The Lost Eclipse Film

ಕಾಣೆಯಾದ ಸೂರ್ಯಗ್ರಹಣದ ಫಿಲ್ಮ್

Buxar, 1898: a camera filmed a total eclipse of the Sun, and the film never reached England. John Bacon counted 92 seconds of totality; the sky, computed for their camp, gives about 99.

ಬಕ್ಸರ್, 1898: ಒಂದು ಕ್ಯಾಮೆರಾ ಖಗ್ರಾಸ ಸೂರ್ಯಗ್ರಹಣವನ್ನು ಚಿತ್ರೀಕರಿಸಿತು; ಆ ಫಿಲ್ಮ್ ಇಂಗ್ಲೆಂಡ್ ತಲುಪಲೇ ಇಲ್ಲ. ಜಾನ್ ಬೇಕನ್ ಎಣಿಸಿದ ಖಗ್ರಾಸದ ಅವಧಿ 92 ಸೆಕೆಂಡುಗಳು; ಅವರ ಶಿಬಿರಕ್ಕೆ ಲೆಕ್ಕ ಹಾಕಿದ ಆಕಾಶ ಸುಮಾರು 99 ಎನ್ನುತ್ತದೆ.

Watch, with sources →ನೋಡಿ, ಮಾಹಿತಿ ಮೂಲಗಳೊಂದಿಗೆ →
2023–2026 · 8 min

45 Hours for an Answer

ಉತ್ತರಕ್ಕೆ 45 ಗಂಟೆ

Voyager 1, one light-day from Earth. When its computer failed, every command took about 45 hours to answer. How engineers repaired it from 24 billion kilometres away.

ವಾಯೇಜರ್ 1 — ಭೂಮಿಯಿಂದ ಬೆಳಕಿನ ಒಂದು ದಿನದಷ್ಟು ದೂರ. ಅದರ ಕಂಪ್ಯೂಟರ್ ಕೆಟ್ಟಾಗ, ಕಳುಹಿಸಿದ ಆದೇಶ ಕೆಲಸ ಮಾಡಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸುಮಾರು 45 ಗಂಟೆಗಳ ಕಾಲ ಕಾಯಬೇಕಿತ್ತು.

Watch, with sources →ನೋಡಿ, ಮಾಹಿತಿ ಮೂಲಗಳೊಂದಿಗೆ →
1529 · 8 min

The Eclipse Vijayanagara Never Saw

ವಿಜಯನಗರ ಕಾಣದ ಗ್ರಹಣ

An inscription records the day Krishnadevaraya died, a full moon. That full moon was a total eclipse of the Moon. No one in his capital could have seen it.

ಕೃಷ್ಣದೇವರಾಯರು ನಿಧನರಾದ ದಿನವನ್ನು ಒಂದು ಶಾಸನ ದಾಖಲಿಸಿದೆ: ಅಂದು ಹುಣ್ಣಿಮೆ. ಅಂದಿನ ಹುಣ್ಣಿಮೆಯ ಚಂದ್ರನಿಗೆ ಗ್ರಹಣ ಹಿಡಿದಿತ್ತು. ಆದರೆ ಅವರ ರಾಜಧಾನಿಯಲ್ಲಿ ಯಾರೂ ಅದನ್ನು ನೋಡಲು ಸಾಧ್ಯವಿರಲಿಲ್ಲ.

Watch, with sources →ನೋಡಿ, ಮಾಹಿತಿ ಮೂಲಗಳೊಂದಿಗೆ →

More films are on the way, each added here when it is released.

ಇನ್ನಷ್ಟು ಸಾಕ್ಷ್ಯಚಿತ್ರಗಳು ಬರಲಿವೆ; ಬಿಡುಗಡೆಯಾದಂತೆ ಇಲ್ಲಿ ಸೇರಿಸಲಾಗುವುದು.

⌂
© 2026 NakshatraGanita · All rights reserved · ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ
Terms & licence · ನಿಯಮಗಳು ಮತ್ತು ಪರವಾನಗಿ