NakshatraGanitaFilmsಸಾಕ್ಷ್ಯಚಿತ್ರಗಳು
Sky Detective · Film
ಆಕಾಶದ ಸಾಕ್ಷಿ · ಸಾಕ್ಷ್ಯಚಿತ್ರ

The Eclipse Vijayanagara Never Saw

ವಿಜಯನಗರ ಕಾಣದ ಗ್ರಹಣ

The death of Krishnadevaraya and the lunar eclipse of 1529. An inscription records the day he died, a full moon. That full moon was a total eclipse of the Moon, and no one in his capital could have seen it.

ಕೃಷ್ಣದೇವರಾಯರ ನಿಧನ ಮತ್ತು 1529ರ ಚಂದ್ರಗ್ರಹಣ. ಅವರು ನಿಧನರಾದ ದಿನವನ್ನು ಒಂದು ಶಾಸನ ದಾಖಲಿಸಿದೆ: ಅಂದು ಹುಣ್ಣಿಮೆ. ಅಂದಿನ ಹುಣ್ಣಿಮೆಯ ಚಂದ್ರನಿಗೆ ಗ್ರಹಣ ಹಿಡಿದಿತ್ತು; ಆದರೆ, ಅವರ ರಾಜಧಾನಿಯಲ್ಲಿ ಆ ಗ್ರಹಣವನ್ನು ಯಾರೂ ನೋಡಲು ಸಾಧ್ಯವಿರಲಿಲ್ಲ.

English and Kannada versionsಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಗಳು Music only, with captionsಸಂಗೀತ ಮತ್ತು ಶೀರ್ಷಿಕೆ ಪಠ್ಯ 17 Oct 1529 (Julian)1529ರ ಅಕ್ಟೋಬರ್ 17 (ಜೂಲಿಯನ್)

Chapters

ಅಧ್ಯಾಯಗಳು

The story

ಕಥೆ

An inscription at Honnenahalli (Tumakuru district), published by K. R. Narasimhan in 2021, records the day Krishnadevaraya of Vijayanagara passed away: Śaka 1452, the year Virodhi, Kārtika śuddha 15, the full moon.

We checked it with NakshatraGanita's calculation. The year, the year name and the full moon all fit: 17 October 1529 (Julian calendar). The inscription does not mention an eclipse, but that full moon was a total eclipse of the Moon. In NASA's catalogue it has the smallest magnitude of any total lunar eclipse from 2000 BCE to 3000 CE.

At Hampi the middle of the eclipse came at 12:12 in the afternoon, with the Moon 61° below the horizon. It was seen over the Pacific and the Americas. No one in Vijayanagara could have seen it. Today we can see it, through astronomical calculation.

2021ರಲ್ಲಿ ಕೆ. ಆರ್. ನರಸಿಂಹನ್ ಅವರು ಪ್ರಕಟಿಸಿದ, ತುಮಕೂರು ಜಿಲ್ಲೆಯ ಹೊನ್ನೇನಹಳ್ಳಿಯ ಕನ್ನಡ ಶಾಸನವು ವಿಜಯನಗರದ ಶ್ರೀ ಕೃಷ್ಣದೇವರಾಯರು ನಿಧನರಾದ ದಿನವನ್ನು ದಾಖಲಿಸಿದೆ: ಶಕ 1452, ವಿರೋಧಿ ಸಂವತ್ಸರ, ಕಾರ್ತಿಕ ಶುದ್ಧ 15, ಹುಣ್ಣಿಮೆ.

ನಕ್ಷತ್ರಗಣಿತದ ಲೆಕ್ಕಾಚಾರದಿಂದ ಇದನ್ನು ಪರಿಶೀಲಿಸಿದೆವು. ವರ್ಷ, ಸಂವತ್ಸರ, ಹುಣ್ಣಿಮೆ — ಎಲ್ಲವೂ ಹೊಂದುತ್ತವೆ: 1529ರ ಅಕ್ಟೋಬರ್ 17 (ಜೂಲಿಯನ್ ಕ್ಯಾಲೆಂಡರ್). ಶಾಸನದಲ್ಲಿ ಗ್ರಹಣದ ಉಲ್ಲೇಖವಿಲ್ಲ; ಆದರೆ ಅಂದಿನ ಹುಣ್ಣಿಮೆಯಂದು ಖಗ್ರಾಸ ಚಂದ್ರಗ್ರಹಣ ಸಂಭವಿಸಿತ್ತು. ನಾಸಾ ಪಟ್ಟಿಯ ಪ್ರಕಾರ, ಕ್ರಿ.ಪೂ. 2000ರಿಂದ ಕ್ರಿ.ಶ. 3000ರವರೆಗಿನ ಖಗ್ರಾಸ ಚಂದ್ರಗ್ರಹಣಗಳಲ್ಲಿ ಇದರ ಪ್ರಮಾಣವೇ ಅತ್ಯಂತ ಕಡಿಮೆ.

ಆದರೆ ಹಂಪಿಯಲ್ಲಿ ಗ್ರಹಣದ ಮಧ್ಯಭಾಗ ಮಧ್ಯಾಹ್ನ 12:12ಕ್ಕೆ; ಆಗ ಚಂದ್ರ ಹಂಪಿಯ ದಿಗಂತಕ್ಕಿಂತ 61 ಡಿಗ್ರಿ ಕೆಳಗಿದ್ದ. ಗ್ರಹಣ ಗೋಚರಿಸಿದ್ದು ಪೆಸಿಫಿಕ್ ಸಾಗರ ಮತ್ತು ಅಮೆರಿಕ ಖಂಡಗಳಲ್ಲಿ. ವಿಜಯನಗರದಲ್ಲಿ ಯಾರೂ ಅದನ್ನು ನೋಡಲು ಸಾಧ್ಯವಿರಲಿಲ್ಲ. ಇಂದು ಅದನ್ನು ಕಾಣಬಹುದು: ಖಗೋಳ ಗಣಿತದ ಮೂಲಕ.

What we checked

ನಕ್ಷತ್ರಗಣಿತದ ಲೆಕ್ಕಾಚಾರದಿಂದ ಪರಿಶೀಲನೆ

Year
ವರ್ಷ
Śaka 1452 (current year) = 1529 CE
ಶಕ 1452 (ವರ್ತಮಾನ) = ಕ್ರಿ.ಶ. 1529
Year name
ಸಂವತ್ಸರ
In the 60-year cycle, (1451 elapsed + 12) ÷ 60, remainder 23. The 23rd year of the cycle: Virodhi ✓
ಅರವತ್ತು ವರ್ಷಗಳ ಚಕ್ರದ ಪ್ರಕಾರ, (1451 ಗತ + 12) ÷ 60. ಶೇಷ 23. ಚಕ್ರದ 23ನೇ ಸಂವತ್ಸರ — ವಿರೋಧಿ. ✓
Month
ತಿಂಗಳು
Kārtika: the full moon after the new moon with the Sun in Tulā ✓
ಕಾರ್ತಿಕ: ಸೂರ್ಯ ತುಲಾ ರಾಶಿಯಲ್ಲಿದ್ದಾಗಿನ ಅಮಾವಾಸ್ಯೆಯ ನಂತರದ ಹುಣ್ಣಿಮೆ ✓
Full moon
ಹುಣ್ಣಿಮೆ
17 October 1529 (Julian) ✓
17 ಅಕ್ಟೋಬರ್ 1529 (ಜೂಲಿಯನ್) ✓
Weekday
ವಾರದ ದಿನ
Sunday ✓ Not written on the stone: a check of the date conversion.
ಭಾನುವಾರ ✓ ಶಾಸನದಲ್ಲಿ ಇಲ್ಲ; ದಿನಾಂಕ ಪರಿವರ್ತನೆಯ ಪರಿಶೀಲನೆ.
Eclipse
ಗ್ರಹಣ
Not mentioned on the stone. But that full moon was a total eclipse of the Moon ✓ In NASA's catalogue: magnitude 1.0001, totality only about 2 minutes, the smallest magnitude of any total lunar eclipse from 2000 BCE to 3000 CE.
ಶಾಸನದಲ್ಲಿ ಉಲ್ಲೇಖವಿಲ್ಲ. ಆದರೆ ಅಂದಿನ ಹುಣ್ಣಿಮೆಯಂದು ಖಗ್ರಾಸ ಚಂದ್ರಗ್ರಹಣ. ✓ ನಾಸಾ ಪಟ್ಟಿಯ ಪ್ರಕಾರ, ಗ್ರಹಣದ ಪ್ರಮಾಣ: 1.0001. ಸಂಪೂರ್ಣ ಗ್ರಹಣದ ಅವಧಿ: ಕೇವಲ ಸುಮಾರು ಎರಡು ನಿಮಿಷ. ಕ್ರಿ.ಪೂ. 2000ರಿಂದ ಕ್ರಿ.ಶ. 3000ರವರೆಗಿನ ಖಗ್ರಾಸ ಚಂದ್ರಗ್ರಹಣಗಳಲ್ಲಿ ಇದರ ಪ್ರಮಾಣವೇ ಅತ್ಯಂತ ಕಡಿಮೆ.
At Hampi
ಹಂಪಿಯಲ್ಲಿ
Middle of the eclipse: 12:12 midday (local time). The Moon was 61° below the horizon, and below it for the whole eclipse. The Moon rose at 5:42 p.m., about four hours after the eclipse had ended. Not visible
ಗ್ರಹಣದ ಮಧ್ಯಭಾಗ: ಮಧ್ಯಾಹ್ನ 12:12 (ಸ್ಥಳೀಯ ಸಮಯ). ಚಂದ್ರ ಹಂಪಿಯ ದಿಗಂತಕ್ಕಿಂತ 61 ಡಿಗ್ರಿಗಳಷ್ಟು ಕೆಳಗೆ; ಗ್ರಹಣದ ಉದ್ದಕ್ಕೂ ದಿಗಂತದ ಕೆಳಗೇ. ಹಂಪಿಯಲ್ಲಿ ಚಂದ್ರೋದಯವಾದದ್ದು ಸಂಜೆ 5:42ಕ್ಕೆ. ಅಷ್ಟರಲ್ಲಾಗಲೇ ಗ್ರಹಣ ಮುಗಿದು ಸುಮಾರು ನಾಲ್ಕು ಗಂಟೆಗಳಾಗಿದ್ದವು. ✗
Where it was seen
ಎಲ್ಲಿ ಕಂಡಿತು
Over the Pacific and in parts of the Americas.
ಪೆಸಿಫಿಕ್ ಸಾಗರದ ಪ್ರದೇಶಗಳಲ್ಲಿ ಮತ್ತು ಅಮೆರಿಕ ಖಂಡಗಳ ಕೆಲವು ಭಾಗಗಳಲ್ಲಿ.

Hampi: 15°20′ N, 76°28′ E. Times are local mean time. Our calculation puts the middle of the eclipse at 12:11, NASA's at 12:12. For the same eclipse our engine gives a magnitude of 1.012 and about 13 minutes of totality. Both agree that it was total, and that it was below Hampi's horizon.

ಹಂಪಿ: 15°20′ ಉ, 76°28′ ಪೂ. ಸಮಯಗಳು ಸ್ಥಳೀಯ ಸರಾಸರಿ ಸಮಯದಲ್ಲಿ. ನಮ್ಮ ಲೆಕ್ಕಾಚಾರದ ಪ್ರಕಾರ ಗ್ರಹಣದ ಮಧ್ಯಭಾಗ 12:11ಕ್ಕೆ, ನಾಸಾ ಪ್ರಕಾರ 12:12ಕ್ಕೆ. ಅದೇ ಗ್ರಹಣಕ್ಕೆ ನಮ್ಮ ಲೆಕ್ಕಾಚಾರ ನೀಡುವ ಪ್ರಮಾಣ 1.012, ಸಂಪೂರ್ಣ ಗ್ರಹಣದ ಅವಧಿ ಸುಮಾರು 13 ನಿಮಿಷ. ಗ್ರಹಣ ಖಗ್ರಾಸವಾಗಿತ್ತು ಮತ್ತು ಹಂಪಿಯ ದಿಗಂತದ ಕೆಳಗಿತ್ತು ಎಂಬುದರಲ್ಲಿ ಎರಡೂ ಒಂದೇ.

Check it yourself.

The film gives the date in the Julian calendar, as historians do for dates before 1582: 17 October 1529. Our Panchanga page uses the Gregorian calendar, which was 10 days ahead in 1529, so the same day there is 27 October 1529. Open it and you will find the full moon and the total eclipse of the Moon.

Open 27 October 1529 →
ನೀವೇ ಪರಿಶೀಲಿಸಿ.

ಸಾಕ್ಷ್ಯಚಿತ್ರದಲ್ಲಿರುವುದು ಜೂಲಿಯನ್ ದಿನಾಂಕ (1529ರ ಅಕ್ಟೋಬರ್ 17); 1582ಕ್ಕೂ ಹಿಂದಿನ ದಿನಾಂಕಗಳನ್ನು ಇತಿಹಾಸಕಾರರು ಹೀಗೆಯೇ ಸೂಚಿಸುತ್ತಾರೆ. ನಮ್ಮ ಪಂಚಾಂಗ ಪುಟ ಗ್ರೆಗೋರಿಯನ್ ಕ್ಯಾಲೆಂಡರ್ ಬಳಸುತ್ತದೆ; 1529ರಲ್ಲಿ ಅದು 10 ದಿನ ಮುಂದಿತ್ತು. ಆದ್ದರಿಂದ ಅಲ್ಲಿ ಅದೇ ದಿನ 1529ರ ಅಕ್ಟೋಬರ್ 27. ತೆರೆದು ನೋಡಿ: ಹುಣ್ಣಿಮೆ ಮತ್ತು ಖಗ್ರಾಸ ಚಂದ್ರಗ್ರಹಣ ಕಾಣುತ್ತವೆ.

1529ರ ಅಕ್ಟೋಬರ್ 27 ತೆರೆಯಿರಿ →

What the inscription says, and what it does not

ಶಾಸನ ಏನು ಹೇಳುತ್ತದೆ, ಏನು ಹೇಳುವುದಿಲ್ಲ

Sources

ಮಾಹಿತಿ ಮೂಲಗಳು

ಮೂಲಗಳನ್ನು ಸಾಕ್ಷ್ಯಚಿತ್ರದಲ್ಲಿರುವಂತೆ ಇಂಗ್ಲಿಷ್‌ನಲ್ಲೇ ನೀಡಲಾಗಿದೆ.

Credits

ಕೃತಜ್ಞತೆ

A NakshatraGanita film. Research, calculation and animation by NakshatraGanita.

ನಕ್ಷತ್ರಗಣಿತದ ಒಂದು ಸಾಕ್ಷ್ಯಚಿತ್ರ. ಸಂಶೋಧನೆ, ಲೆಕ್ಕಾಚಾರ ಮತ್ತು ಅನಿಮೇಷನ್ – ನಕ್ಷತ್ರಗಣಿತ.

ಭೂಮಿಯ ಚಿತ್ರಣ: ನಾಸಾ. ನಗರ, ಗೋಪುರ, ಮಾರುಕಟ್ಟೆ, ಸಭಾಂಗಣ ಮತ್ತು ಶಿಲಾಫಲಕ — ಇವು ಮರುಸೃಷ್ಟಿಗಳು; ಶಾಸನದ ಪಠ್ಯವನ್ನು ತೋರಿಸಿಲ್ಲ. ಸೂರ್ಯ, ಚಂದ್ರರ ಪ್ರತಿಯೊಂದು ಸ್ಥಾನವೂ ಲೆಕ್ಕಾಚಾರದಿಂದ ಪಡೆದದ್ದು. ಕೋಡ್ ಮೂಲಕ ರಚಿಸಿದ ಅನಿಮೇಷನ್.

⌂
© 2026 NakshatraGanita · All rights reserved · ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ
Terms & licence · ನಿಯಮಗಳು ಮತ್ತು ಪರವಾನಗಿ