NakshatraGanitaFilmsಸಾಕ್ಷ್ಯಚಿತ್ರಗಳು
Sky Detective · Film
ಆಕಾಶದ ಸಾಕ್ಷಿ · ಸಾಕ್ಷ್ಯಚಿತ್ರ

The Lost Eclipse Film

ಕಾಣೆಯಾದ ಸೂರ್ಯಗ್ರಹಣದ ಫಿಲ್ಮ್

Buxar, on the Ganges, 22 January 1898. A camera filmed a total eclipse of the Sun. When the box reached England, the film was gone. What can the sky tell us about a film no one has seen?

ಗಂಗಾ ತೀರದ ಬಕ್ಸರ್, 1898ರ ಜನವರಿ 22. ಒಂದು ಕ್ಯಾಮೆರಾ ಖಗ್ರಾಸ ಸೂರ್ಯಗ್ರಹಣವನ್ನು ಚಿತ್ರೀಕರಿಸಿತು. ಪೆಟ್ಟಿಗೆ ಇಂಗ್ಲೆಂಡ್ ತಲುಪಿದಾಗ ಫಿಲ್ಮ್ ಇರಲಿಲ್ಲ. ಯಾರೂ ನೋಡದ ಫಿಲ್ಮ್ ಬಗ್ಗೆ ಆಕಾಶ ಏನು ಹೇಳುತ್ತದೆ?

English and Kannada versionsಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಗಳು Music only, with captionsಸಂಗೀತ ಮತ್ತು ಶೀರ್ಷಿಕೆ ಪಠ್ಯ 22 Jan 18981898ರ ಜನವರಿ 22

Chapters

ಅಧ್ಯಾಯಗಳು

The story

ಕಥೆ

On 22 January 1898 a team of the British Astronomical Association camped at Buxar, on the Ganges, with a camera built by Nevil Maskelyne to film a total eclipse of the Sun. The Rev. John Bacon worked it, five or six pictures a second, to see whether the Sun's corona changes during totality.

The film worked. It was packed that night to be developed in England. Maskelyne met the case at Tilbury himself: the small box was there, the film was not. A reward of £50 brought no reply, and the film has never been found. Two years later Maskelyne filmed the eclipse of 1900 in America, and that film survives.

We recomputed the eclipse for their camp and checked their own records against the sky. Bacon counted 92 seconds of totality; his daughter's book says 96; the calculation gives about 99. Their count was right within a few seconds. The film is lost. The sky it recorded is not.

1898ರ ಜನವರಿ 22ರಂದು ಬ್ರಿಟಿಷ್ ಖಗೋಳಶಾಸ್ತ್ರ ಸಂಘದ ತಂಡವೊಂದು ಗಂಗಾ ನದಿಯ ತೀರದಲ್ಲಿರುವ ಬಕ್ಸರ್‌ನಲ್ಲಿ ಶಿಬಿರ ಹಾಕಿತ್ತು. ಖಗ್ರಾಸ ಸೂರ್ಯಗ್ರಹಣವನ್ನು ಚಿತ್ರೀಕರಿಸಲು ನೆವಿಲ್ ಮಾಸ್ಕಲೀನ್ ತಯಾರಿಸಿದ್ದ ವಿಶೇಷ ಕ್ಯಾಮೆರಾ ಅವರ ಬಳಿಯಿತ್ತು. ರೆವರೆಂಡ್ ಜಾನ್ ಬೇಕನ್ ಆ ಕ್ಯಾಮೆರಾವನ್ನು ನಿರ್ವಹಿಸಿದರು. ಖಗ್ರಾಸದ ಸಮಯದಲ್ಲಿ ಸೂರ್ಯನ ಕರೋನಾದಲ್ಲಿ ಬದಲಾವಣೆ ಆಗುತ್ತದೆಯೇ ಎಂದು ತಿಳಿಯಲು ಪ್ರತಿ ಸೆಕೆಂಡಿಗೆ ಐದಾರು ಚಿತ್ರಗಳನ್ನು ತೆಗೆದರು.

ಚಿತ್ರೀಕರಣ ಯಶಸ್ವಿಯಾಯಿತು. ಅಂದು ರಾತ್ರಿ ಫಿಲ್ಮ್ ಅನ್ನು ಇಂಗ್ಲೆಂಡ್‌ಗೆ ಕಳುಹಿಸಿ, ಅಲ್ಲಿ ಡೆವಲಪ್ ಮಾಡಲು ಸುರಕ್ಷಿತವಾಗಿ ಪ್ಯಾಕ್ ಮಾಡಲಾಯಿತು. ಆದರೆ ಆ ಪೆಟ್ಟಿಗೆ ಇಂಗ್ಲೆಂಡ್ ತಲುಪಿದಾಗ ಅದರೊಳಗೆ ಫಿಲ್ಮ್ ಇರಲಿಲ್ಲ. ಫಿಲ್ಮ್ ಹುಡುಕಿಕೊಟ್ಟವರಿಗೆ £50 ಬಹುಮಾನ ನೀಡುವುದಾಗಿ ಘೋಷಿಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಆ ಫಿಲ್ಮ್ ಇಂದಿಗೂ ಪತ್ತೆಯಾಗಿಲ್ಲ. ಎರಡು ವರ್ಷಗಳ ನಂತರ, ಮಾಸ್ಕಲೀನ್ 1900ರಲ್ಲಿ ಅಮೆರಿಕದಲ್ಲಿ ನಡೆದ ಸೂರ್ಯಗ್ರಹಣವನ್ನು ಚಿತ್ರೀಕರಿಸಿದರು. ಆ ಫಿಲ್ಮ್ ಇಂದಿಗೂ ಸುರಕ್ಷಿತವಾಗಿದೆ.

ಅವರು ಶಿಬಿರ ಹಾಕಿದ್ದ ಸ್ಥಳದಲ್ಲಿ ಮತ್ತೆ ಗ್ರಹಣದ ಲೆಕ್ಕಾಚಾರ ಮಾಡಿದೆವು. ಜೊತೆಗೆ, ಅವರು ಬರೆದ ದಾಖಲೆಗಳನ್ನು ನಿಜವಾದ ಆಕಾಶದ ಸ್ಥಿತಿಯೊಂದಿಗೆ ಹೋಲಿಸಿದೆವು. ಜಾನ್ ಬೇಕನ್ ಖಗ್ರಾಸದ ಅವಧಿಯನ್ನು 92 ಸೆಕೆಂಡುಗಳೆಂದು ದಾಖಲಿಸಿದ್ದರು. ಅವರ ಮಗಳ ಪುಸ್ತಕದಲ್ಲಿ ಅದು 96 ಸೆಕೆಂಡುಗಳೆಂದು ಉಲ್ಲೇಖಿಸಲಾಗಿದೆ. ಆದರೆ ನಮ್ಮ ಲೆಕ್ಕಾಚಾರದ ಪ್ರಕಾರ ಅದರ ಅವಧಿ ಸುಮಾರು 99 ಸೆಕೆಂಡುಗಳು. ಅಂದರೆ ಕೆಲವೇ ಸೆಕೆಂಡುಗಳ ವ್ಯತ್ಯಾಸವಿದೆ. ಅವರ ಲೆಕ್ಕಾಚಾರ ಸರಿಯಾಗಿತ್ತು ಎಂಬುದು ಇದರಿಂದ ತಿಳಿಯುತ್ತದೆ. ಫಿಲ್ಮ್ ಕಳೆದುಹೋಗಿರಬಹುದು. ಆದರೆ ಅದು ಸೆರೆಹಿಡಿದ ಆಕಾಶ ಮಾತ್ರ ಕಳೆದುಹೋಗಿಲ್ಲ.

What we checked

ನಕ್ಷತ್ರಗಣಿತದ ಲೆಕ್ಕಾಚಾರದಿಂದ ಪರಿಶೀಲನೆ

The eclipse
ಗ್ರಹಣ
Total eclipse of the Sun, 22 January 1898 (NASA catalogue no. 09275) ✓
ಖಗ್ರಾಸ ಸೂರ್ಯಗ್ರಹಣ, 1898ರ ಜನವರಿ 22 (ನಾಸಾ ಪಟ್ಟಿ ಸಂಖ್ಯೆ 09275) ✓
The camp
ಶಿಬಿರ
Buxar, 25°33′ N, 84°0′ E (the 1899 report). Almost on the centre line of a path about 96 km wide ✓
ಬಕ್ಸರ್, 25°33′ ಉ, 84°0′ ಪೂ (1899ರ ವರದಿ). ಸುಮಾರು 96 ಕಿ.ಮೀ. ಅಗಲದ ಖಗ್ರಾಸ ಪಟ್ಟಿಯ ಬಹುತೇಕ ಮಧ್ಯರೇಖೆಯ ಮೇಲೆ ✓
The shadow
ನೆರಳು
In from the Arabian Sea, across India in about 30 minutes
ಅರಬ್ಬೀ ಸಮುದ್ರದ ಕಡೆಯಿಂದ ಬಂದು ಸುಮಾರು 30 ನಿಮಿಷಗಳಲ್ಲಿ ಭಾರತವನ್ನು ದಾಟಿತು
At the camp
ಶಿಬಿರದಲ್ಲಿ
Totality from 13:57 local mean time, with the Sun 38° above the horizon
ಸ್ಥಳೀಯ ಸರಾಸರಿ ಸಮಯ 13:57ರಿಂದ ಖಗ್ರಾಸ; ಸೂರ್ಯ ದಿಗಂತದಿಂದ 38° ಎತ್ತರದಲ್ಲಿ
How long?
ಎಷ್ಟು ಹೊತ್ತು?
John Bacon's report: 92 seconds. His daughter Gertrude's book: 96 seconds. Computed for the camp: about 99 seconds. Within a few seconds
ಜಾನ್ ಬೇಕನ್ ವರದಿ: 92 ಸೆಕೆಂಡು. ಅವರ ಮಗಳು ಗರ್ಟ್ರೂಡ್ ಪುಸ್ತಕ: 96 ಸೆಕೆಂಡು. ಶಿಬಿರಕ್ಕೆ ಲೆಕ್ಕ ಹಾಕಿದ ಅವಧಿ: ಸುಮಾರು 99 ಸೆಕೆಂಡು. ಕೆಲವೇ ಸೆಕೆಂಡುಗಳ ವ್ಯತ್ಯಾಸ
Why shorter?
ಏಕೆ ಕಡಿಮೆ?
The Moon's edge is rugged: sunlight comes back through its valleys a little before the smooth-edge calculation says totality ends.
ಚಂದ್ರನ ಅಂಚು ಏರುತಗ್ಗಿನದು: ನಯವಾದ ಅಂಚಿನ ಲೆಕ್ಕಾಚಾರ ಹೇಳುವುದಕ್ಕಿಂತ ಸ್ವಲ್ಪ ಮೊದಲೇ ಅದರ ಕಣಿವೆಗಳ ಮೂಲಕ ಸೂರ್ಯನ ಬೆಳಕು ಹೊರಬರುತ್ತದೆ.

Times are local mean time at the camp. Our calculation (the engine behind this site) gives totality from 08:21:34 to 08:23:14 UT, 99.4 seconds; a second method, from the sizes of the two discs, gives 99.4 to 101.4 seconds depending on the Moon's radius. NASA's catalogue gives the path width as 96 km and the greatest eclipse near 9° N, 64° E, over the Arabian Sea.

ಇಲ್ಲಿ ನೀಡಿರುವ ಸಮಯಗಳು ಶಿಬಿರದ ಸ್ಥಳೀಯ ಸರಾಸರಿ ಸಮಯಕ್ಕೆ ಅನುಗುಣವಾಗಿವೆ. ನಮ್ಮ ಲೆಕ್ಕಾಚಾರದ ಪ್ರಕಾರ (ಈ ತಾಣದ ಎಂಜಿನ್ ಬಳಸಿ) ಖಗ್ರಾಸವು 08:21:34ರಿಂದ 08:23:14 UTವರೆಗೆ ಇತ್ತು. ಇದರ ಒಟ್ಟು ಅವಧಿ 99.4 ಸೆಕೆಂಡುಗಳು. ಎರಡು ಬಿಂಬಗಳ ಗಾತ್ರವನ್ನು ಆಧರಿಸಿ ಮಾಡಿದ ಮತ್ತೊಂದು ಲೆಕ್ಕಾಚಾರದಲ್ಲಿ, ಚಂದ್ರನ ತ್ರಿಜ್ಯವನ್ನು ಅವಲಂಬಿಸಿ ಈ ಅವಧಿ 99.4ರಿಂದ 101.4 ಸೆಕೆಂಡುಗಳವರೆಗೆ ಬರುತ್ತದೆ. ನಾಸಾದ ಪಟ್ಟಿಯ ಪ್ರಕಾರ ಖಗ್ರಾಸದ ಪಥದ ಅಗಲ 96 ಕಿ.ಮೀ. ಆಗಿತ್ತು. ಗರಿಷ್ಠ ಗ್ರಹಣವು ಅರಬ್ಬೀ ಸಮುದ್ರದ ಮೇಲೆ, ಸುಮಾರು 9° ಉತ್ತರ ಅಕ್ಷಾಂಶ ಮತ್ತು 64° ಪೂರ್ವ ರೇಖಾಂಶದಲ್ಲಿ ಸಂಭವಿಸಿತು.

Check it yourself.

Open 22 January 1898 on our Panchanga page and choose Bengaluru: the solar eclipse is there, but from Bengaluru it was partial, with about 81% of the Sun covered. Totality fell only on a strip about 96 km wide. Even Varanasi, about 100 km west of the camp, was just outside it. That is why the team went to Buxar.

Open 22 January 1898 →
ನೀವೇ ಪರಿಶೀಲಿಸಿ.

ನಮ್ಮ ಪಂಚಾಂಗ ಪುಟದಲ್ಲಿ 1898ರ ಜನವರಿ 22 ತೆರೆದು ಬೆಂಗಳೂರು ಆರಿಸಿ: ಸೂರ್ಯಗ್ರಹಣ ಕಾಣುತ್ತದೆ; ಆದರೆ ಬೆಂಗಳೂರಿನಿಂದ ಅದು ಪಾರ್ಶ್ವ ಗ್ರಹಣ, ಸೂರ್ಯನ ಸುಮಾರು 81% ಮಾತ್ರ ಮರೆಯಾಗಿತ್ತು. ಖಗ್ರಾಸ ಕಂಡದ್ದು ಸುಮಾರು 96 ಕಿ.ಮೀ. ಅಗಲದ ಪಟ್ಟಿಯಲ್ಲಿ ಮಾತ್ರ. ಶಿಬಿರದಿಂದ ಸುಮಾರು 100 ಕಿ.ಮೀ. ಪಶ್ಚಿಮದ ವಾರಾಣಸಿ ಕೂಡ ಆ ಪಟ್ಟಿಯಿಂದ ಸ್ವಲ್ಪ ಹೊರಗಿತ್ತು. ಅದಕ್ಕೇ ತಂಡ ಬಕ್ಸರ್‌ಗೆ ಹೋಯಿತು.

1898ರ ಜನವರಿ 22 ತೆರೆಯಿರಿ →

What the records say, and what they do not

ದಾಖಲೆಗಳು ಏನು ಹೇಳುತ್ತವೆ ಮತ್ತು ಏನು ಹೇಳುವುದಿಲ್ಲ

Sources

ಮಾಹಿತಿ ಮೂಲಗಳು

ಮೂಲಗಳನ್ನು ಸಾಕ್ಷ್ಯಚಿತ್ರದಲ್ಲಿರುವಂತೆ ಇಂಗ್ಲಿಷ್‌ನಲ್ಲೇ ನೀಡಲಾಗಿದೆ.

Credits

ಕೃತಜ್ಞತೆ

A NakshatraGanita film. Research, calculation and animation by NakshatraGanita.

ನಕ್ಷತ್ರಗಣಿತದ ಒಂದು ಸಾಕ್ಷ್ಯಚಿತ್ರ. ಸಂಶೋಧನೆ, ಲೆಕ್ಕಾಚಾರ ಮತ್ತು ಅನಿಮೇಷನ್ – ನಕ್ಷತ್ರಗಣಿತ.

ಭೂಮಿಯ ಚಿತ್ರಣ: ನಾಸಾ. ತಾರೆಗಳ ದತ್ತಾಂಶ: HYG database. ಕ್ಯಾಮೆರಾ ಮತ್ತು ಕರೋನಾ ಮರುರೂಪಣೆಗಳು; ಕರೋನಾದ ಆಕಾರ ಅಂದು ಬಕ್ಸರ್‌ನಲ್ಲಿ ಬಿಡಿಸಿದ ಚಿತ್ರಗಳನ್ನು ಅನುಸರಿಸುತ್ತದೆ. ಸೂರ್ಯ, ಚಂದ್ರರ ಪ್ರತಿಯೊಂದು ಸ್ಥಾನವೂ ಲೆಕ್ಕಾಚಾರದಿಂದ ಪಡೆದದ್ದು. ಕೋಡ್ ಮೂಲಕ ರಚಿಸಿದ ಅನಿಮೇಷನ್.

⌂
© 2026 NakshatraGanita · All rights reserved · ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ
Terms & licence · ನಿಯಮಗಳು ಮತ್ತು ಪರವಾನಗಿ