Voyager 1, one light-day from Earth. In 2023 its computer stopped sending readable data, and every command took about 45 hours to answer. How engineers repaired it from 24 billion kilometres away.
ವಾಯೇಜರ್ 1 — ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರದಲ್ಲಿರುವ ಬಾಹ್ಯಾಕಾಶ ನೌಕೆ.
2023ರಲ್ಲಿ, ಅದರ ಕಂಪ್ಯೂಟರ್ ಅರ್ಥವಾಗುವಂತಹ ಮಾಹಿತಿಯನ್ನು ಭೂಮಿಗೆ ಕಳುಹಿಸುವುದನ್ನು ನಿಲ್ಲಿಸಿತು. ಅದರ ಪ್ರತಿಯೊಂದು ಆದೇಶಕ್ಕೂ ಪ್ರತಿಕ್ರಿಯೆ ಬರಲು ಸುಮಾರು 45 ಗಂಟೆಗಳ ಕಾಲ ಕಾಯಬೇಕಾಗಿತ್ತು. ಬರೋಬ್ಬರಿ 2,400 ಕೋಟಿ ಕಿಲೋಮೀಟರ್ ದೂರದಲ್ಲಿದ್ದ ವಾಯೇಜರ್ 1 ಅನ್ನು ಎಂಜಿನಿಯರ್ಗಳು ಹೇಗೆ ದುರಸ್ತಿ ಮಾಡಿದರು?
On 5 September 1977, Voyager 1 began its journey from Earth. Nothing made by humans has travelled farther. In August 2012 it left the region ruled by the Sun and entered the space between the stars, and it kept sending its messages to Earth.
On 14 November 2023, signals were still arriving from Voyager, but they held nothing that could be read: the same pattern of ones and zeros came again and again, as if the computer were stuck. The fault was in one of its three computers, the flight data subsystem, which gathers data from the spacecraft's instruments and prepares it for sending to Earth. Restarting it did not help.
Voyager was about 24.33 billion kilometres from Earth. A command took 22 hours and 33 minutes to reach it, and the reply took just as long to come back: about 45 hours to learn whether a command had worked. On 1 March 2024 the engineers sent a special test command, a "poke". Its reply reached Earth on 3 March: a readout of that computer's entire memory, showed that about three per cent of the memory was corrupted. They suspected a single memory chip had stopped working.
The chip could not be replaced, and nowhere in the computer was there a free space large enough for the code it held. So the engineers divided the code into small sections, placed each in a different free part of the memory, and updated the addresses so that the sections still worked together. The new code was sent on 18 April 2024. On 20 April, for the first time in five months, Voyager sent readable engineering data about its own condition. By June, all four working science instruments were returning data.
On 18 November 2026, at 3:46 in the afternoon Indian time, Voyager 1 is one light-day from Earth: about 25.9 billion kilometres. Nothing changes aboard Voyager at that moment, only the yardstick by which we measure its distance. A message from Earth now takes 24 hours to arrive, and the answer 24 more.
1977ರ ಸೆಪ್ಟೆಂಬರ್ 5ರಂದು ವಾಯೇಜರ್ 1 ಭೂಮಿಯಿಂದ ತನ್ನ ಪ್ರಯಾಣ ಆರಂಭಿಸಿತು. ಮಾನವ ನಿರ್ಮಿತ ಯಾವುದೇ ವಸ್ತು ಇದಕ್ಕಿಂತ ಹೆಚ್ಚು ದೂರ ಪ್ರಯಾಣಿಸಿಲ್ಲ. 2012ರ ಆಗಸ್ಟ್ನಲ್ಲಿ ಅದು ಸೂರ್ಯನ ಪ್ರಭಾವವಿರುವ ವಲಯವನ್ನು ದಾಟಿ, ನಕ್ಷತ್ರಗಳ ನಡುವಿನ ಅಂತರಿಕ್ಷವನ್ನು ಪ್ರವೇಶಿಸಿತು. ಅಷ್ಟು ದೂರದಿಂದಲೂ ಅದು ಭೂಮಿಗೆ ತನ್ನ ಸಂದೇಶಗಳನ್ನು ಕಳುಹಿಸುತ್ತಲೇ ಇತ್ತು.
2023ರ ನವೆಂಬರ್ 14. ವಾಯೇಜರ್ನಿಂದ ಸಂಕೇತಗಳು ಬರುತ್ತಿದ್ದವು. ಆದರೆ ಅವುಗಳಲ್ಲಿ ಅರ್ಥವಾಗುವ ಮಾಹಿತಿಯಿರಲಿಲ್ಲ. ಒಂದೇ ರೀತಿಯ ಸೊನ್ನೆ ಮತ್ತು ಒಂದರ ಸರಣಿ ಮತ್ತೆ ಮತ್ತೆ ಬರುತ್ತಿತ್ತು. ಕಂಪ್ಯೂಟರ್ ಎಲ್ಲೋ ಸಿಲುಕಿಕೊಂಡಂತೆ. ಸಮಸ್ಯೆ ಅದರ ಮೂರು ಕಂಪ್ಯೂಟರ್ಗಳಲ್ಲಿ ಒಂದಾಗಿದ್ದ ಫ್ಲೈಟ್ ಡೇಟಾ ಸಬ್ಸಿಸ್ಟಮ್ನಲ್ಲಿ ಇತ್ತು. ಈ ಕಂಪ್ಯೂಟರ್ ನೌಕೆಯ ವಿವಿಧ ಉಪಕರಣಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ಭೂಮಿಗೆ ಕಳುಹಿಸಲು ಸಿದ್ಧಪಡಿಸುತ್ತಿತ್ತು. ಎಂಜಿನಿಯರ್ಗಳು ಅದನ್ನು ಮರುಪ್ರಾರಂಭಿಸಿ ನೋಡಿದರು. ಆದರೂ ಸಮಸ್ಯೆ ಬಗೆಹರಿಯಲಿಲ್ಲ.
ಆ ಸಮಯದಲ್ಲಿ ವಾಯೇಜರ್ ಭೂಮಿಯಿಂದ ಸುಮಾರು 2,433 ಕೋಟಿ ಕಿಲೋಮೀಟರ್ ದೂರದಲ್ಲಿತ್ತು. ಭೂಮಿಯಿಂದ ಕಳುಹಿಸಿದ ಒಂದು ಆದೇಶ ವಾಯೇಜರ್ ತಲುಪಲು 22 ಗಂಟೆ 33 ನಿಮಿಷ ಬೇಕಾಗುತ್ತಿತ್ತು. ಅಲ್ಲಿಂದ ಉತ್ತರ ಮರಳಿ ಬರಲು ಮತ್ತೆ ಅಷ್ಟೇ ಸಮಯ. ಅಂದರೆ, ಕಳುಹಿಸಿದ ಆದೇಶ ಕೆಲಸ ಮಾಡಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸುಮಾರು 45 ಗಂಟೆಗಳ ಕಾಲ ಕಾಯಬೇಕಿತ್ತು. 2024ರ ಮಾರ್ಚ್ 1ರಂದು ಎಂಜಿನಿಯರ್ಗಳು ವಾಯೇಜರ್ಗೆ ಒಂದು ವಿಶೇಷ ಪರೀಕ್ಷಾ ಆದೇಶ ಕಳುಹಿಸಿದರು. ಅದಕ್ಕೆ ಅವರು ಇಟ್ಟ ಹೆಸರು — "ಪೋಕ್". ಮಾರ್ಚ್ 3ರಂದು ಅದರ ಉತ್ತರ ಭೂಮಿಗೆ ತಲುಪಿತು. ಅದು ವಾಯೇಜರ್ನ ಆ ಕಂಪ್ಯೂಟರ್ನ ಸಂಪೂರ್ಣ ಮೆಮೊರಿಯ ಓದಬಹುದಾದ ಪ್ರತಿ ಆಗಿತ್ತು. ಅದನ್ನು ಪರಿಶೀಲಿಸಿದಾಗ ಮೆಮೊರಿಯ ಸುಮಾರು ಶೇಕಡಾ ಮೂರರಷ್ಟು ಭಾಗ ಹಾಳಾಗಿರುವುದು ತಿಳಿಯಿತು. ಒಂದು ಮೆಮೊರಿ ಚಿಪ್ ಕೆಲಸ ಮಾಡದಿರುವುದು ಇದಕ್ಕೆ ಕಾರಣವಿರಬಹುದು ಎಂದು ಎಂಜಿನಿಯರ್ಗಳು ಶಂಕಿಸಿದರು.
ಹಾಳಾಗಿದ್ದ ಚಿಪ್ ಅನ್ನು ಬದಲಾಯಿಸಲು ಸಾಧ್ಯವಿರಲಿಲ್ಲ. ಹಾಳಾದ ಮೆಮೊರಿಯಲ್ಲಿದ್ದ ಸಾಫ್ಟ್ವೇರ್ ಕೋಡ್ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕಿತ್ತು. ಆದರೆ ಅದನ್ನು ಇಡಲು ಸಾಕಷ್ಟು ದೊಡ್ಡ ಖಾಲಿ ಜಾಗ ಕಂಪ್ಯೂಟರ್ನಲ್ಲಿ ಎಲ್ಲಿಯೂ ಇರಲಿಲ್ಲ. ಆ ಕೋಡ್ ಅನ್ನು ಸಣ್ಣ ಸಣ್ಣ ಭಾಗಗಳಾಗಿ ವಿಭಜಿಸಿದರು. ಪ್ರತಿ ಭಾಗವನ್ನೂ ಕಂಪ್ಯೂಟರ್ನ ಬೇರೆ ಬೇರೆ ಖಾಲಿ ಮೆಮೊರಿ ಜಾಗಗಳಲ್ಲಿ ಇರಿಸಿದರು. ಆ ಎಲ್ಲಾ ಭಾಗಗಳೂ ಒಟ್ಟಾಗಿ ಸರಿಯಾಗಿ ಕೆಲಸ ಮಾಡುವಂತೆ ಕೋಡ್ನಲ್ಲಿ ಬದಲಾವಣೆ ಮಾಡಿದರು. ಜೊತೆಗೆ, ಹೊಸ ಸ್ಥಳಗಳನ್ನು ಗುರುತಿಸುವಂತೆ ಅವುಗಳ ವಿಳಾಸಗಳನ್ನೂ ಬದಲಿಸಿದರು. 2024ರ ಏಪ್ರಿಲ್ 18ರಂದು ಹೊಸ ಸಾಫ್ಟ್ವೇರ್ ಕೋಡ್ ಅನ್ನು ರೇಡಿಯೋ ಸಂಕೇತಗಳ ಮೂಲಕ ವಾಯೇಜರ್ಗೆ ಕಳುಹಿಸಲಾಯಿತು. ಏಪ್ರಿಲ್ 20ರಂದು ಭೂಮಿಗೆ ಉತ್ತರ ತಲುಪಿತು. ಐದು ತಿಂಗಳ ನಂತರ ಮೊದಲ ಬಾರಿಗೆ, ವಾಯೇಜರ್ ತನ್ನ ಸ್ಥಿತಿಗತಿಗಳ ಬಗ್ಗೆ ಅರ್ಥವಾಗುವ ತಾಂತ್ರಿಕ ಮಾಹಿತಿಯನ್ನು ಭೂಮಿಗೆ ಕಳುಹಿಸಿತು. ಜೂನ್ ವೇಳೆಗೆ ನಾಲ್ಕೂ ಸಕ್ರಿಯ ವೈಜ್ಞಾನಿಕ ಉಪಕರಣಗಳಿಂದ ಮಾಹಿತಿ ಮರಳಿ ಬರತೊಡಗಿತು.
2026ರ ನವೆಂಬರ್ 18. ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆ 46 ನಿಮಿಷ. ವಾಯೇಜರ್ 1 ಭೂಮಿಯಿಂದ ಬೆಳಕಿನ ಒಂದು ದಿನದಷ್ಟು ದೂರವನ್ನು ತಲುಪಲಿದೆ.ವಾಯೇಜರ್ 1 ಭೂಮಿಯಿಂದ ಬೆಳಕಿನ ಒಂದು ದಿನದಷ್ಟು ದೂರವನ್ನು ತಲುಪಿತು. ಅಂದರೆ ಸುಮಾರು 2,590 ಕೋಟಿ ಕಿಲೋಮೀಟರ್! ಆ ಕ್ಷಣದಲ್ಲಿ ವಾಯೇಜರ್ನಲ್ಲಿ ಏನೂ ಬದಲಾಗಲಿಲ್ಲ. ಬದಲಾಗಿದ್ದು ಭೂಮಿಯಿಂದ ಅದರ ದೂರವನ್ನು ಅಳೆಯುವ ನಮ್ಮ ಮಾನದಂಡ ಮಾತ್ರ. ಈಗ ಭೂಮಿಯಿಂದ ಕಳುಹಿಸುವ ಒಂದು ಸಂದೇಶ ತಲುಪಲು 24 ಗಂಟೆ. ಉತ್ತರ ಮರಳಿ ಬರಲು ಮತ್ತೊಂದು 24 ಗಂಟೆ.
Positions: JPL Horizons, Voyager 1 (target −31), from the Earth's centre, geometric, no light-time correction. This is the definition NASA uses for the milestone.
ಸ್ಥಾನಗಳು: JPL Horizons, ವಾಯೇಜರ್ 1 (−31), ಭೂಮಿಯ ಕೇಂದ್ರದಿಂದ, ಜ್ಯಾಮಿತೀಯ ದೂರ. NASA ಈ ಮೈಲಿಗಲ್ಲಿಗೆ ಬಳಸುವುದೂ ಇದೇ ವ್ಯಾಖ್ಯೆ.
45 hours was the round trip in 2024, when engineers repaired Voyager 1 from 24 billion km away. Voyager keeps moving away, so from 18 November 2026 it is 48.
2024ರಲ್ಲಿ ಎಂಜಿನಿಯರ್ಗಳು ಸುಮಾರು 2,400 ಕೋಟಿ ಕಿ.ಮೀ. ದೂರದಲ್ಲಿದ್ದ ವಾಯೇಜರ್ 1 ಅನ್ನು ದುರಸ್ತಿ ಮಾಡಿದಾಗ, ಸಂದೇಶ ಹೋಗಿ ಉತ್ತರ ಮರಳಲು ಬೇಕಾಗಿದ್ದ ಸಮಯ ಅದು. 2026ರ ನವೆಂಬರ್ 18ರಿಂದ ಅದು 48 ಗಂಟೆ.
ಆಧಾರಗಳನ್ನು ಸಾಕ್ಷ್ಯಚಿತ್ರದಲ್ಲಿರುವಂತೆ ಇಂಗ್ಲಿಷ್ನಲ್ಲೇ ನೀಡಲಾಗಿದೆ.
A NakshatraGanita film. Research, calculation and animation by NakshatraGanita.
ನಕ್ಷತ್ರಗಣಿತದ ಒಂದು ಸಾಕ್ಷ್ಯಚಿತ್ರ. ಸಂಶೋಧನೆ, ಲೆಕ್ಕಾಚಾರ ಮತ್ತು ಅನಿಮೇಷನ್ – ನಕ್ಷತ್ರಗಣಿತ.